Tourism

 

 

 

 ಔರಾದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳು

 

ಅಮರೇಶ್ವರ ದೇವಾಲಯ: ಔರಾದ ಪಟ್ಟಣದ ಅಮರೇಶ್ವರ ದೇವಾಲಯವು ತುಂಬಾ ಪ್ರಸಿದ್ದಿಯಾಗಿರುತ್ತದೆ, ಇದು ಪಟ್ಟಣದ ಮಧ್ಯಭಾಗದಲ್ಲಿದ್ದು, ಈ ದೇವಾಲಯವು 10ನೇ ಶತಮಾನದಲ್ಲಿ ಸ್ಥಾಪಿಸಿರುತ್ತಾರೆ. ದೇವಾಲಯದ ಕಟ್ಟಡ ವೇಸರ ಶೈಲಿ ಮಾದರಿಯಲ್ಲಿದೆ. ಕನ್ನಡ ಮತ್ತು ಉರ್ದು ಭಾಷೆಯ ಶಾಸನಗಳು ಈ ದೇವಾಲಯದಲ್ಲಿರುವುದು ಧಾರ್ಮಿಕ ಸಮನ್ವಯದ ಪ್ರತೀಕವಾಗಿದೆ.ದೇವಾಲಯದ ಗರ್ಭಗುಡಿಯಲ್ಲಿ ಕಾಶಿ ಮಾದರಿಯ ಉದ್ಭವ ಲಿಂಗವಿದೆ ಸಮಕಾಲೀನ ಶರಣ ಪರಂಪರೆಯ ಅಮರೇಶ್ವರ ಶರಣರು, ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯದ ವರ ನೀಡುವ ಪವಾಡ ಪುರುಷರಾಗಿದ್ದರು ಎಂಬ ಪ್ರತೀತಿ ಇದೆ. ಅಮರೇಶ್ವರ ದೇವಾಲಯ ನಿರ್ಮಾಣದ ಸಂದರ್ಭದಲ್ಲಿಯೇ ಅದರ ದಕ್ಷಿಣ ದಿಕ್ಕಿಗೆ ೧ ಕಿ.ಮೀ. ಅಂತರದಲ್ಲಿ ನಿರ್ಮಿಸಲಾದ ಪುರಾತನ ಚಂದನಕೆರೆಯೊಂದಿಗೆ ದೇವಾಲಯದ ಉತ್ತರಕ್ಕೆ ಪುರಾತನ ಕಾಲದ ಅಮೃತ ಕುಂಡಯಿದ್ದು ಸದಾಕಾಲ ನೀರಿನ ಒರತೆ ಇರುವುದು ಇಲ್ಲಿಯ ವಿಶೇಷ. ಶಿವರಾತ್ರಿಯ ಸಂದರ್ಭದಲ್ಲಿ ಸಾಂಸ್ಕೃತಿಕ ವೈಭವದ ಒಂದು ವಾರ ಕಾಲ ಅಂತರರಾಜ್ಯ ಅಮರೇಶ್ವರ ಜಾತ್ರೆ ನಡೆಯುತ್ತದೆ.

ಒಂಟೆ ಜಾತ್ರೆ: ಕಳೆದ ಐದು ದಶಕಗಳಿಂದ ರಾಜ್ಯದ ಏಕ್ಯೆಕ ಒಂಟೆ ಜಾತ್ರೆ ನಡೆಯುವ ಸ್ಥಳವಿದು.

 ಶಿವಾಜಿ ಸಂತಾಜಿಯ ಸ್ಮಾರಕ: ನಿಜಾಮ ಶಾಹಿ ದಬ್ಬಾಳಿಕೆ ಆಡಳಿತ ವಿರುದ್ಧ ಧ್ವನಿ ಎತ್ತಿ ಈ ಭಾಗದ ಶಿವಾಜಿ ಎಂದೇ ಖ್ಯಾತರಾದ ಸಂತಾಜಿ ಪಾಂಡ್ರೆ ಅವರ ಅಪರೂಪದ ಸ್ಮಾರಕ. ಈ ಹಿಂದೆ ತಾಲೂಕು ಕೇಂದ್ರದ ಸ್ಥಾನಮಾನ ಹೊಂದಿರುವ ಸಂತಪೂರ ಎಂಬ ಹೆಸರು ಸಂತಾಜಿ ಪಾಂಡ್ರೆ ಹೆಸರಿನಿಂದಲೇ ಬಂದಿದೆ ಎಂದು ಹೇಳುತ್ತಾರೆ. ಈ ಭಾಗ ನಿಜಾಮನ ಆಡಳಿತದ ವ್ಯಾಪ್ತಿಯಲ್ಲಿದ್ದಾಗ ಆಗಿನ ಅಧಿಕಾರಿಗಳು, ಪೊಲೀಸರು ಒತ್ತಾಯ ಪೂರ್ವಕವಾಗಿ ಜನರಿಂದ ಕರ ವಸೂಲಿ ಮಾಡುತ್ತಿದ್ದರು. ಧೈರ್ಯ ಶಾಲಿಯಾದ ಸಂತಾಜಿ ಪಾಂಡ್ರೆ ಒತ್ತಾಯದ ಕರ ವಸೂಲಿ ಮಾಡುವುದರ ವಿರುದ್ಧ ಪ್ರತಿಭಟಿಸಿದರು. ಕರ ವಸೂಲಿಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. ಇದರಿಂದ ಕೆರಳಿದ ನಿಜಾಮನ ಪೊಲೀಸರು ಒಂದು ದಿನ ರಾತ್ರಿ ಬಂದು ಯಾರಿಗೊ ಗೊತ್ತಿಲ್ಲದಂತೆ ಸಂತಾಜಿ ಪಾಂಡ್ರೆಯವರನ್ನು ಬಂಧಿಸಿ ಹೈದ್ರಾಬಾದಿಗೆ ಕರೆದೊಯ್ದರು. ಅಲ್ಲಿ ಅವರಿಗೆ ಸಾಕಷ್ಟು ಚಿತ್ರ ಹಿಂಸೆ ನೀಡಿದರು. ಅದರ ಪರಿಣಾಮ ಅವರು ಮರಣ ಹೊಂದಿದರು. ಮರಣ ಹೊಂದುವ ಪೂರ್ವ ನಿಜಾಮ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ನಾನು ನಿರ್ಮಿಸಿದ ಸ್ಮಾರಕದಲ್ಲಿ ನಮ್ಮ ಸಮಾಧಿಯಾಗಬೇಕೆಂದು ಅಧಿಕಾರಿಗಳಿಗೆ ಕೇಳಿಕೊಂಡರು. ಅದರಂತೆ ಸಂತಾಜಿ ಪಾಂಡ್ರೆಯವರ ಸಮಾಧಿ ಸಂತಪೂರದಲ್ಲಿ ಮಾಡಲಾಗಿದೆ ಎಂಬ ಹಿರಿಯರ ವಾಣಿ ಇದೆ. ಸಂತಾಜಿಯವರ ಸ್ಮಾರಕ ಬೃಹದಾಕಾರವಾಗಿದ್ದು, ನೋಡಲು ನಯನ ಮನೋಹರವಾಗಿದೆ. ಸ್ಮಾರಕದ ಎದುರು ಆಕರ್ಷಕ ನೀರಿನ ಹೊಂಡವಿದ್ದು ಇದು ನೀರು ಚಿಮ್ಮುವ ಕಾರಂಜಿ ಎಂದು ಕರೆಯಲಾಗುತ್ತಿದೆ. 

 

This Page is maintained by Sri. Md Yousuf, Chief Officer, Contact No:9739102711

No. Of Visitors :
Last Updated   : 08/02/2012 Release History
Release 2.0.0, Powered By Karnataka Municipal Data Society & maintained by Aurad TP
This website can best viewed with the resolution 1024 * 768 using Internet Explorer 7.0 or above.
Valid CSS!