Home
Brief about Aurad Town Panchayat ಆಂಧ್ರ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಔರಾದ ತಾಲೂಕು ರಾಜ್ಯದ ಉತ್ತರದ ತುತ್ತ ತುದಿಯಲ್ಲಿದೆ. ರಾಜ್ಯದ ಏಕೈಕ ಒಂಟೆ ಜಾತ್ರೆ ನಡೆಯುವ, ಸಾಂಸ್ಕೃತಿಕ ವೈಭವ ಪಡೆದ ಹೆಗ್ಗಳಿಕೆಹೊಂದಿದೆ. ನಯನ ಮನೋಹರವಾದ ಗುಡ್ಡ-ಬೆಟ್ಟಗಳು, ಕಣಿವೆ - ಕೊಳಗಳು ತಾಲೂಕಿನ ಭೌಗೋಳಿಕ ಆಕರ್ಷಣೆಗಳಾಗಿವೆ. ನವಿಲು ಧಾಮಕ್ಕೆ ಬೇಕಾದಷ್ಟು ಭೂಮಿಯಿದೆ. ಚಾಲುಕ್ಯರ ಕಾಲದ ಇತಿಹಾಸ ಪ್ರಸಿದ್ಧ ಔರಾದ ಪಟ್ಟಣದ ಜೈನ ದೇವಾಲಯ ಗಮನ ಸೆಳೆಯುವ ತಾಣವಾಗಿದೆ. ತಾಲೂಕಿನ ಡೋಣಗಾಂವ (ಎಮ್) ಮಾಳಪ್ಪಯ್ಯ ಸಂಸ್ಥಾನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಹೇರಳ ಔಷಧಿಯ ಸಸ್ಯಗಳನ್ನು ಒಳಗೊಂಡ ವನ ಸಂಪತ್ತು ಮತ್ತಿತರೆ ಪ್ರವಾಸಿ ತಾಣಗಳು ತಾಲೂಕಿನ ಹೆಮ್ಮೆಯ ಕೊಡುಗೆಯಾಗಿವೆ.
ಗಣಕೀಕರಣ : ಪಟ್ಟಣ ಪಂಚಾಯತ ಔರಾದ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕೃತಗೊಳಿಸುವದು ಪ್ರಗತಿಯಲ್ಲಿದು ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1995 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ನಾಗರಿಕರು ತಮ್ಮ ದೂರುಗಳು ಆನ್ಲೈನ್ ಅಥವಾ ದೂರವಾಣಿ ಸಂಖ್ಯೆ 08485-280516/280356 ಮೂಲಕ ನೂಂದಣೆ ಮಾಡಬಹುದು. Computerisation: Properties within TP limits have been identified through field survey and the Computerisation of detail information collected through survey is under process. Birth & Death records are available online from the year 1995. Citizens are requested to use this facility for registration and obtain Birth and Death Certificates Online only . Citizens can register there Complaints online or through Phone No: 08485-280516/280356. We never know the worth of water till the well is dry Take care of the earth and she will take care of you A little water is a sea to an ant It's important to have . . . greenery in a city, not just because it looks nice
This Page is maintained by Chief Officer TP Aurad(B), Contact Number: 9739102711

